Job Description: ನವದೆಹಲಿ: ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳು ಜಂಟಿಯಾಗಿ "ಮಲಬಾರ್ ನೌಕಾ ಸಮರಾಭ್ಯಾಸ" ಎಂಬ ಹೆಸರಿನ ಈ ಸಮರಭ್ಯಾಸ 2020 ವರ್ಷದ ಕೊನೆಯಲ್ಲಿ ನಡೆಸಲು ಮುಂದಾಗಿವೆ. ಪ್ರತಿ ಬಾರಿ ಸಾಮಾನ್ಯವಾಗಿ ಭಾರತ, ಅಮೆರಿಕ ಮತ್ತು ಜಪಾನ್ನ ನೌಕಾಪಡೆಗಳು ಮಾತ್ರವೇ ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದವು. ಆದರೆ, ಈ ಬಾರಿ ಆಸ್ಟ್ರೇಲಿಯಾವನ್ನು ಸೇರಿಸಿಕೊಳ್ಳಲು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. * ಒಂದು ವೇಳೆ ಆಸ್ಟ್ರೇಲಿಯಾವನ್ನು ಈ ಸಮರಾಭ್ಯಾಸಕ್ಕೆ ಸೇರಿಸಿಕೊಳ್ಳಲು ಭಾರತ ನಿರ್ಧರಿಸಿದರೆ, ಇಂಡೋ-ಪೆಸಿಫಿಕ್ ಮಹಾಸಾಗರದ ವ್ಯಾಪ್ತಿಯಲ್ಲಿ ಚತುಷ್ಕೋನ ಮೈತ್ರಿಕೂಟಕ್ಕೆ ಹೆಚ್ಚಿನ ಬಲ ಒದಗಲಿದೆ. * ಈ ಮೂಲಕ ಜಾಗತಿಕವಾಗಿ ಚೀನಾ ವಿರೋಧಿ ರಾಷ್ಟ್ರಗಳು ಒಂದಾಗಬೇಕು ಎಂದು ಅಮೆರಿಕದ ಸಂಸತ್ ಸದಸ್ಯ ಜಾನ್ ಕೆನಡಿ ಹೇಳಿಕೆ ಮುನ್ನೆಲೆಗೆ ಬಂದಂತಾಗುತ್ತದೆ.