Job Description: ನವದೆಹಲಿ: ಪ್ರಸ್ತುತ ಚೀನಾದೊಂದಿಗಿನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ ಈ ಸಮಯದಲ್ಲಿ ಅಮೆರಿಕದ ಏರೋಸ್ಪೇಸ್ ಕಂಪನಿಯು ಭಾರತಕ್ಕೆ 5 ಬೋಯಿಂಗ್ ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ಗಳನ್ನು ಸರಬರಾಜು ಮಾಡಿದೆ. ಈ ಮೂಲಕ ಭಾರತವು ಖರೀದಿಸಿದ್ದ 22 ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ನ ಕೊನೆಯ ಕಂತು ಇದಾಗಿತ್ತು. ಈ ಮೂಲಕ ಭಾರತಕ್ಕೆ ಅಮೆರಿಕದ ಏರೋಸ್ಪೇಸ್ ಕಂಪನಿಯು ಒಟ್ಟು 22 ಅಪಾಚೆ ಅಟ್ಯಾಕ್ ಹೆಲಿಕಾಪ್ಟರ್ ಮತ್ತು 15 ಚಿನೋಕ್ ಮಿಲಿಟರಿ ಹೆಲಿಕಾಪ್ಟರ್ಗಳನ್ನು ಪೂರೈಕೆ ಮಾಡಿದಂತಾಗಿದೆ. * 2015 ರ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ವಾಯುಪಡೆಗಾಗಿ ಕೇಂದ್ರ ಸರ್ಕಾರವು ಒಟ್ಟು 22 ಅಪಾಚೆ ಮತ್ತು 15 ಚಿನೋಕ್ ಹೆಲಿಕಾಪ್ಟರ್ಗಳನ್ನು ಖರೀದಿಗಾಗಿ 100 ಕೋಟಿ ಡಾಲರ್ ಒಪ್ಪಂದ ಮಾಡಿಕೊಂಡಿತ್ತು.