Job Description: ಬೆಂಗಳೂರು: ಇಡೀ ದೇಶದಲ್ಲಿಯೇ ಅತ್ಯಂತ ಬೃಹತ್ ಕೋರೋಣ ಕೇರ್ ಸೆಂಟರ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ತನ್ನ ಸೇವೆ ಒದಗಿಸಲಿದೆ. ನಗರದ ಹೊರವಲಯದಲ್ಲಿರುವ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಈ ಆಸ್ಪತ್ರೆ ನಿರ್ಮಿಸಲಾಗಿದ್ದು, ಒಟ್ಟು 10,100 ಹಾಸಿಗೆಗಳ ಸಾಮರ್ಥ್ಯದ ಕೋರೋಣ ಕೇರ್ ಸೆಂಟರ್ ಇದಾಗಿದೆ. * ಈ ಬೃಹತ್ ಕೋವಿಡ್ ಕೇರ್ ಸೆಂಟರ್ನಲ್ಲಿ 100-200 ಜನರಿಗೆ ಒಬ್ಬ ವೈದ್ಯರಂತೆ ಸುಮಾರು 600 ವೈದ್ಯರು, 1000 ನರ್ಸ್ಗಳು ಹಾಗೂ ಇನ್ನಿತರ ಆರೋಗ್ಯ ಯೋಧರು ಸೇರಿ ಸುಮಾರು 2200 ಸಿಬ್ಬಂದಿಯನ್ನು ಸೇವೆಗೆ ಸರ್ಕಾರ ನೇಮಿಸಲಿದೆ.