Job Description: ನವದೆಹಲಿ : ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್(ಎಂಸಿಎ) ಕೋರ್ಸ್ ಭಾರತದಲ್ಲಿ ಇದುವರೆಗೆ 3 ವರ್ಷಗಳ ಸ್ನಾತಕೋತ್ತರ ಪದವಿಯಾಗಿತ್ತು, ಆದರೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಕೌನ್ಸಿಲ್ (ಎಐಸಿಟಿಇ) ಈ ಪದವಿಯನ್ನು 2 ವರ್ಷಗಳಿಗೆ ಸೀಮಿತಿಗೊಳಿಸಿ ನಿರ್ಧಾರ ಕೈಗೊಂಡಿದೆ. ಯುಜಿಸಿ 545ನೇ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರವಾದಂತೆ ಡಿಸೆಂಬರ್ 19, 2019ಕ್ಕೆ ಎಐಸಿಟಿಇಗೆ ಈ ಕುರಿತಂತೆ ನಿರ್ದೇಶನ ಸಿಕ್ಕಿದೆ. ಇತೀಚೆಗೆ ನಡೆದ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಹಾಗೂ 2020 -21ನೇ ಶೈಕ್ಷಣಿಕ ಸಾಲಿನಿಂದ ಈ ನಿಯಮ ಜಾರಿಗೆ ಬರಲಿದೆ