Job Description: ವಾಷಿಂಗ್ಟನ್ : ಕೊರೊನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಪರ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದ್ದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ, ಅಧಿಕೃತವಾಗಿ ವಿಶ್ವ ಅರೋಗ್ಯ ಸಂಸ್ಥೆಯಿಂದ ಹೊರನಡೆದಿದ್ದಾರೆ. ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ಅಮೆರಿಕವು ಈ ಕುರಿತು ಮಾಹಿತಿ ರವಾನೆ ಮಾಡಿದ್ದು, ಬರುವ ಜುಲೈ 8, 2021 ರಿಂದ ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಗುಳಿಯಲಿದೆ ಎಂದು ತಿಳಿಸಿದ್ದಾರೆ. ಚೀನಾ ದೇಶವು ಉದ್ದೇಶವಪೂರ್ವಕವಾಗಿ ಜಗತ್ತಿಗೆ ಕೊರೊನಾ ವೈರಸ್ ಸೋಂಕನ್ನು ಹರಡಿಸಿದ್ದು, ಈ ಕುರಿತು ಸೂಕ್ತ ತನಿಖೆ ಅಗತ್ಯ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಆದರೆ, ಈ ಆರೋಪಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ ಹಿನ್ನಲೆ, ಆಕ್ರೋಶಗೊಂಡ ಡೊನಾಲ್ಡ್ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿದ್ದು, WHO ಗೆ ನೀಡುವ ಅನುದಾನವನ್ನು ನಾವು ನಿಲ್ಲಿಸುತ್ತೇವೆ ಎಂದು ಮೇ ತಿಂಗಳಲ್ಲಿ ಟ್ರಂಪ್ ಘೋಷಣೆ ಮಾಡಿದ್ದರು. * ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಪ್ರತಿ ವರ್ಷ 300 ಕೋಟಿ ಅನುದಾನ ನೀಡುತ್ತಿದೆ. ಹಾಗೂ ಅಮೆರಿಕ 3 ಸಾವಿರ ಕೋಟಿ ಅನುದಾನ ನೀಡುತ್ತಿದೆ ಎಂಬ ಮಾಹಿತಿ ಇದೆ.