Job Description: ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೊಸ ಪ್ಯಾನ್ ಇಂಡಿಯಾ ಕೇಂದ್ರ ವಲಯ ಯೋಜನೆಗೆ ಅನುಮೋದನೆ ನೀಡಲಾಯಿತು. ಈ ಹೊಸ ಕೇಂದ್ರ ವಲಯ ಯೋಜನೆಯನ್ನು ‘ಕೃಷಿ ಮೂಲಸೌಕರ್ಯ ನಿಧಿ’ (Agriculture Infrastructure Fund) ಎಂದು ಕರೆಯಲಾಗುತ್ತದೆ. 20 ಲಕ್ಷ ಕೋಟಿ ರೂ.ಗಳ ಆತ್ಮನಿರ್ಭಾರ ಭಾರತ್ ಯೋಜನೆಯ ಭಾಗವಾಗಿ ‘ಕೃಷಿ ಮೂಲಸೌಕರ್ಯ ನಿಧಿ’ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವರು ಘೋಷಿಸಿದರು. ಈ ಯೋಜನೆಯಡಿ ಕೃಷಿ ವಲಯಕ್ಕೆ ರೈತ ಉತ್ಪಾದಕ ಸಂಸ್ಥೆಗಳು (FPO), ಸ್ಟಾರ್ಟ್ಅಪ್, ಪ್ರಾಥಮಿಕ ಕೃಷಿ ಸಾಲ ಸಂಘಗಳು, ಕೃಷಿ ಉದ್ಯಮಿಗಳಿಗೆ ದೇಶದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ 1 ಲಕ್ಷ ಕೋಟಿ ರೂ.ಗಳವರೆಗೆ ಹಣಕಾಸಿನ ನೆರವು ನೀಡಲಾಗುವುದು. ಕೃಷಿ ಮೂಲಸೌಕರ್ಯ ನಿಧಿ : * ಈ ಯೋಜನೆಯ ಅವಧಿ 10 ವರ್ಷಗಳವರೆಗೆ ಅಂದರೆ 2020-21ರ ಆರ್ಥಿಕ ವರ್ಷದಿಂದ 2029-30 ರವರೆಗೆ. * ಈ ಯೋಜನೆಯಡಿ 1 ಲಕ್ಷ ಕೋಟಿ ರೂ.ಗಳ ಸಾಲವನ್ನು ಮಂಜೂರು ಮಾಡಲಾಗುವುದು ಮತ್ತು ಅದರಲ್ಲಿ 2020-21ರ ಆರ್ಥಿಕ ವರ್ಷದಲ್ಲಿ 10,000 ಕೋಟಿ ರೂ. ಆದರೆ ಮುಂದಿನ ಮೂರು ಹಣಕಾಸು ವರ್ಷದಲ್ಲಿ 30,000 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗುವುದು.