Job Description: ವಿದೇಶದಿಂದ ಭಾರತೀಯ ನಾಗರಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಯತ್ನದಲ್ಲಿ, ಭಾರತ ಸರ್ಕಾರವು "ವಂದೇ ಭಾರತ" ಸೇರಿ ಹಲವು ಆಪರೇಷನ್ ಗಳನ್ನೂ ಕೈಗೊಂಡಿತ್ತು, ಅವುಗಳ ಪೈಕಿ ಭಾರತೀಯ ನೌಕಾಪಡೆಯ "ಸಮುದ್ರ ಸೇತು" ಕೂಡ ಒಂದು. 2020 ರ ಮೇ 5 ರಂದು ಭಾರತೀಯ ನೌಕಾಪಡೆಯು "ಆಪರೇಷನ್ ಸಮುದ್ರ ಸೇತು" ಆರಂಬಿಸಿತು ಹಾಗೂ ಒಟ್ಟು 55 ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ 3,992 ಭಾರತೀಯ ನಾಗರಿಕರನ್ನು ಮರಳಿ ಭಾರತೀಯ ನೌಕಾಪಡೆಯು ತಾಯ್ನಾಡಿಗೆ ಕರೆತಂದಿತು. ಈ ಮೊದಲು 2015 ರಲ್ಲಿ ಭಾರತೀಯ ನೌಕಾಪಡೆಯು "ಆಪರೇಷನ್ ರಾಹತ್" ಹೆಸರಿನ ಕಾರ್ಯಾಚರಣೆಯಲ್ಲಿ 5600 ಜನರನ್ನು (960 ವಿದೇಶಿ ಪ್ರಜೆಗಳು, ಉಳಿದ ಭಾರತೀಯ ನಾಗರಿಕರು) ಯೆಮನ್ನಿಂದ ಕರೆತಂದಿತ್ತು.