Job Description: ವಾಷಿಂಗ್ಟನ್: ಕೊರೊನಾ ವೈರಸ್ ಹುಟ್ಟಿನ ಬಗ್ಗೆ ಮಾಹಿತಿ ಪಡೆಯಲು ವಿಶ್ವ ಆರೋಗ್ಯ ಸಂಸ್ಥೆಯ ತಂಡವೊಂದು ಚೀನಾ ರಾಷ್ಟ್ರಕ್ಕೆ ಬರುವ ದಿನಗಳಲ್ಲಿ ಭೇಟಿ ನೀಡಲಿದೆ. ಚೀನಾವು ಕೊರೊನಾ ವೈರಸ್ ಕುರಿತು ಯಾವುದೇ ಮಾಹಿತಿಯನ್ನು ಹೊರ ಜಗತ್ತಿಗೆ ತೋರಿಸಿಕೊಟ್ಟಿಲ್ಲ ಎಂದು ಈಗಾಗಲೇ ಹಲವು ರಾಷ್ಟ್ರಗಳು ಆರೋಪಿಸಿರುವ ಹಿನ್ನಲೆಯಲ್ಲಿ, ಸೋಂಕು ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ತಾವೇ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಲು WHO ಮುಂದಾಗಿದೆ. ವಿಶ್ವ ಅರೋಗ್ಯ ಸಂಸ್ಥೆಯಿಂದ ಭೇಟಿ ನೀಡಲಿರುವ ತಂಡವು ಕೊರೊನಾ ವೈರಸ್ ಹುಟ್ಟಿಕೊಂಡ ಬಗೆ ಹೇಗೆ, ಅದರ ಹುಟ್ಟು, ಅದು ಮನುಷ್ಯನಿಗೆ ಹರಡಿದ್ದು ಹೇಗೆ ಎಂಬುದರ ಕುರಿತು ಅಧ್ಯಯನ ನಡೆಸಲಿದೆ. * ಕೊರೊನಾ ವೈರಸ್ ಸೋಂಕು ಈಗಾಗಲೇ ವಿಶ್ವದಾದ್ಯಂತ 5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದೆ.