Job Description: ಕಳೆದ ವರ್ಷದ ಕರ್ನಾಟಕದಲ್ಲಿ ಪ್ರವಾಹದಿಂದ ಸಾವಿರಾರು ಹಳ್ಳಿಗಳಲ್ಲಿ ತೀವ್ರ ನಷ್ಟ ಅನುಭವಿಸಿದ ಹಿನ್ನಲೆ, ಈಗ "ದೇಶದಲ್ಲಿಯೇ ಮೊದಲ" ಬಾರಿಗೆ "ಗ್ರಾಮವಾರು ಕ್ರಿಯಾ ಯೋಜನೆ"ಯನ್ನು ಸಿದ್ಧಪಡಿಸಲಾಗುತ್ತಿದೆ. ಈ ನೂತನ ಕಾರ್ಯಕ್ರಮದಡಿಯಲ್ಲಿ ಸ್ಥಳೀಯರನ್ನು ಒಳಗೊಂಡಂತೆ ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣೆ ಯೋಜನೆಯನ್ನು ಸಿದ್ದಪಡಿಸಲಾಗುತ್ತಿದ್ದು, * ಪ್ರವಾಹ ಉಂಟಾದರೆ ಸ್ಥಳೀಯವಾಗಿ ಲಭ್ಯವಾಗುವ ಸಂಪನ್ಮೂಲವನ್ನು ಬಳಸಿ ಹೇಗೆ ತಡೆಗಟ್ಟಬೇಕು? * ಎಲ್ಲೆಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಬೇಕು? * ಕೊಚ್ಚಿ ಹೋಗುವ ಪ್ರದೇಶಗಳಲ್ಲಿ ಸಾಧ್ಯವಾದರೆ ಶಾಶ್ವತ , ತುರ್ತು ತಡೆಗೋಡೆಗಳ ನಿರ್ಮಾಣ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ಗ್ರಾಮವಾರು ಮಾಡಲಾಗುತ್ತದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ "ಮನೋಜ್ ರಾಜನ್" ಮಾಹಿತಿ ನೀಡಿದ್ದಾರೆ.