Job Description: ವಿಶ್ವದ ಅತಿದೊಡ್ಡ ಕಾನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಟ್ರಯಲ್ ಯೋಜನೆಯನ್ನು ಮಹಾರಾಷ್ಟ್ರ ರಾಜ್ಯ ಸರ್ಕಾರವು 2020 ಜೂನ್ 29 ರಂದು ಆರಂಭಿಸಿದ್ದು, ಈ ಯೋಜನೆಗೆ ಮಹಾರಾಷ್ಟ್ರ ಸರ್ಕಾರ "ಪ್ಲಾಟಿನಾ" ಎಂದು ನಾಮಕರಣ ಮಾಡಿ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಚಾಲನೆ ನೀಡಿದರು. ಈ ಯೋಜನೆಯಡಿಯಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರದ ಒಟ್ಟು 21 ಕೋವಿಡ್-19 ಆಸ್ಪತ್ರೆಗಳಲ್ಲಿ ದಾಖಲಾದ ಕೋರೋಣ ಪಾಸಿಟಿವ್ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಶಿಫಾರಸ್ಸು ನೀಡಿದೆ. COVID-19 ಸಾಂಕ್ರಾಮಿಕ ರೋಗದಿಂದ ಮಹಾರಾಷ್ಟ್ರವು ಭಾರತದಲ್ಲಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿರುವುದರಿಂದ, ಪ್ಲಾಟಿನಾ ಯೋಜನೆಯನ್ನು ಮಹಾರಾಷ್ಟ್ರ ರಾಜ್ಯವು ಆರಂಭಿಸಿದ್ದು, ಯೋಜನೆಯಡಿ ಪ್ಲಾಸ್ಮಾ ಥೆರಪಿ ಪ್ರಯೋಗಗಳ ವೆಚ್ಚವನ್ನು ಮಹಾರಾಷ್ಟ್ರ ರಾಜ್ಯ ಸರ್ಕಾರ ಭರಿಸಲಿದ್ದು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ, ಯೋಜನೆಗಾಗಿ 16.85 ಕೋಟಿ ರೂ ಅನುದಾನ ನೀಡಲಾಗಿದೆ.