Job Description: ಕಲಬುರ್ಗಿಯಲ್ಲಿ ವಾಸವಿದ್ದ ಕನ್ನಡದ ಹಿರಿಯ ಸಾಹಿತಿ ಗೀತಾ ನಾಗಭೂಷಣ್ ಅವರು ದಿನಾಂಕ ಜೂನ್ 28 ರ ಭಾನುವಾರದಂದು ತಮ್ಮ 78 ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. * 1942, ಮಾರ್ಚ್ 25ರಂದು ಕಲಬುರ್ಗಿಯ ಸಾವಳಗಿ ಗ್ರಾಮದಲ್ಲಿ ಜನಸಿದ ಗೀತಾ ನಾಗಭೂಷಣ್ ಜನಿಸಿದರು. * ಇವರು 27 ಕಾದಂಬರಿಗಳನ್ನ ಬರೆದಿದ್ದಾರೆ ಅವರ 'ಬದುಕು' ಕಾದಂಬರಿಗೆ ಕೇಂದ್ರ ಸಾಹಿತಿ ಅಕಾಡೆಮಿ ಪ್ರಶಸ್ತಿ ಲಭಿಸಿದೆ. 50 ಸಣ್ಣ ಕಥೆಗಳು ಮತ್ತು 12 ನಾಟಕ ಕೃತಿಗಳನ್ನೂ ಅವರು ರಚಿಸಿದ್ದಾರೆ. * ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಗೀತಾ ನಾಗಭೂಷಣ್ ಅವರದ್ದಾಗಿದೆ. * ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಸಾಹಿತಿ. * ನಾಡೋಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ. * ಭಾರತೀಯ ಭಾಷಾ ಪರಿಷತ್ನ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. * ಗದಗ್ನಲ್ಲಿ 2010ರಲ್ಲಿ ನಡೆದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. * ಗುಲ್ಬರ್ಗ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ.