Job Description: ಇಸ್ಲಾಮಾಬಾದ್: ಜಾಗತಿಕವಾಗಿ ವ್ಯಾಪಿಸಿರುವ ಕೋವಿಡ್ ಹಾವಳಿಯಿಂದಾಗಿ ಸ್ಥಗಿತಗೊಂಡಿದ್ದ ಕರ್ತಾರ್ಪುರ ಸಾಹಿಬ್ ಗುರುದ್ವಾರ ಯಾತ್ರೆಯನ್ನು ಇದೆ ಜೂನ್ 29ರಿಂದ ಆರಂಭಿಸುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ. * ಸಿಖ್ ಸಾಮ್ರಾಜ್ಯದ ಸಾಮ್ರಾಟ ಮಹಾರಾಜ ರಂಜಿತ್ ಸಿಂಗ್ ಅವರ ಪುಣ್ಯತಿಥಿಯ (ಜೂನ್ 27) ಸ್ಮರಣಾರ್ಥ ಇದೆ ಜೂನ್ 29 ರಿಂದ ಕರ್ತಾರ್ಪುರ ಕಾರಿಡಾರ್ ಅನ್ನು ಮತ್ತೆ ಆರಂಭಿಸಲಾಗುದೆಂದು ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಮಾಹಿತಿ ನೀಡಿದ್ದಾರೆ. * ಸಿಕ್ಖ್ ಯಾತ್ರಿಕರಿಗೆ ಕರ್ತಾರ್ಪುರ ಗುರುದ್ವಾರ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ಜೂನ್ 29 ರ ಸೋಮವಾರದಿಂದಲೇ ಯಾತ್ರೆ ಪುನಾರಂಭವಾಗುವುದಾಗಿ ಭಾರತ ಸರಕಾರಕ್ಕೂ ಮಾಹಿತಿ ನೀಡಿರುವದಾಗಿ ಅವರು ತಿಳಿಸಿದ್ದಾರೆ.