Job Description: ಜಿನೆವಾ : 2023 ರಲ್ಲಿ ನಡೆಯುವ ಫಿಫಾ ಮಹಿಳಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ರಾಷ್ಟ್ರಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ. ಇತ್ತೀಚಿಗೆ ನಡೆದ ಫಿಫಾ ಕೌನ್ಸಿಲ್ ಸಭೆಯಲ್ಲಿ ಹೆಚ್ಚಿನ ಮತಗಳು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಟೂರ್ನಿ ನಡೆಸುವ ನಿರ್ಣಯದ ಪರ ಚಲಾವಣೆಯಾದ ಪರಿಣಾಮ ಈ ರಾಷ್ಟ್ರಗಳಲ್ಲಿ ಫಿಫಾ ವರ್ಲ್ಡ್ ಕಪ್ ಆಯೋಜಿಸಲಾಗುತ್ತೆ. ಮಹಿಳಾ ಫುಟ್‌ಬಾಲ್‌ಗೆ ಉತ್ತೇಜನ ನೀಡುವ ಉದ್ದೇಶದಿಂದ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು ಮುಂದೆ ಬರುವ ಈ ಟೂರ್ನಿಯಲ್ಲಿ ಒಟ್ಟು 32 ಮಹಿಳಾ ತಂಡಗಳು ಪಾಲ್ಗೊಳ್ಳಲಿರುವ ಮೊದಲ ವಿಶ್ವಕಪ್ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.