Job Description: ನವದೆಹಲಿ : ದೇಶದಲ್ಲಿ ಕೋವಿಡ್ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಆರೋಗ್ಯದ ಸುರಕ್ಷತೆ ದೃಷ್ಟಿಯಿಂದ ಮುಂದೆ ಬರಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಅಂಚೆ ಮೂಲಕ ಮತ ಚಲಾವಣೆಗೆ ಅವಕಾಶ ನೀಡಲಾಗಿರುವ ಅಂಚೆ ಮತಪತ್ರ ಆಯ್ಕೆಗೆ ಇರುವ ವಯೋಮಿತಿಯನ್ನು ಸಡಿಲಿಸಗೊಳಿಸಿ, 65 ಅಥವಾ ಅದಕ್ಕೂ ಹೆಚ್ಚಿನ ವಯೋಮಾನದವರಿಗೆ ಅವಕಾಶ ನೀಡಲಾಗಿದೆ. * ಈ ಮೊದಲು ಅಂಚೆ ಮೂಲಕ ಮತ ಚಲಾವಣೆಗೆ 80 ವರ್ಷ ಹಾಗು ಅದಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. * ಶೀಘ್ರದಲ್ಲೇ ದೇಶದಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅಲ್ಲಿನ ಹಿರಿಯ ನಾಗರೀಕ ಮತದಾರರು ಈ ತಿದ್ದುಪಡಿಯ ಅನುಕೂಲ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. * 65 ಅಥವಾ ಅದಕ್ಕೂ ಮೀರಿದ ವಯಸ್ಸಿನವರಿಗೆ ಕೊರೊನಾ ಬಾಧಿಸುವ ಸಾಧ್ಯತೆ ಹೆಚ್ಚಿರುವ ಕಾರಣ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.