Job Description: ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದ್ದು, ಅವುಗಳ ವಿವಿರ ಈ ಕೆಳಗಿನಂತಿದೆ * ಕೈಗಾರಿಕಾ ಸೌಲಭ್ಯ ತಿದ್ದುಪಡಿ ಕಾಯ್ದೆಗೆ ಅನುಮೋದನೆ * ಎಲೆಕ್ಟ್ರಿಕಲ್ ವೆಹಿಕಲ್ ಪ್ರೊಡಕ್ಷನ್ ಗೆ ತೆರಿಗೆ ವಿನಾಯಿತಿ * ವಿವಿಧ ಹಂತದಲ್ಲಿರುವ 9.74 ಲಕ್ಷ ವಸತಿ ಕಾಮಗಾರಿಗಳಿಗೆ 10,194 ಕೋಟಿ ರೂ ಬಿಡುಗಡೆ * ಪದ್ಮ ಶ್ರೀ ಪ್ರಶಸ್ತಿ ನೀಡಲು ಕ್ಯಾಬಿನೆಟ್ ಸಬ್ ಕಮಿಟಿ, ಸಿಎಸ್ ನೇತೃತ್ವದಲ್ಲಿ ಸಬ್ ಕಮಿಟಿ ರಚನೆ * ಜೀವ ರಕ್ಷಕ ಸಾಧನಗಳ(Advance life support) ಒಳಗೊಂಡ ಆಯಂಬುಲೆನ್ಸ್ 120 ಗಳನ್ನು 32.04 ಕೋಟಿ ರೂ ಖರೀದಿಗೆ ಅನುಮೋದನೆ * ಸಚಿವರು,ಶಾಸಕರು, ಪರಿಷತ್ ಸದಸ್ಯರ ಸಂಬಳದ 30% ಕಡಿತಗೊಳಿಸಲು ಕಾಯ್ದೆಗೆ ತಿದ್ದುಪಡಿ