Job Description: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿರುವ ಶತಮಾನಗಳಷ್ಟು ಹಳೆಯದಾದ ಐತಿಹಾಸಿಕ ಕಾಮಾಖ್ಯ ದೇವಸ್ಥಾನದಲ್ಲಿ, ದಾಖಲೆಗಳ ಪ್ರಕಾರ 1565 ರಿಂದ ಆರು ಶತಮಾನಗಳ ಇತಿಹಾದಲ್ಲೇ ಮೊದಲ ಬಾರಿಗೆ 5 ದಿನಗಳ ಅಂಬುಬಾಚಿ ಮೇಳವನ್ನು ಕೋರೋಣ ವೈರಸ್ ಹರಡುವಿಕೆ ಭೀತಿಯಿಂದ ಆಯೋಜಿಸಲಾಗುವುದಿಲ್ಲ. * ಪ್ರತಿವರ್ಷ ಜಾತ್ರೆಯು ದೇಶಾದ್ಯಂತದ ಲಕ್ಷಾಂತರ ಯಾತ್ರಾರ್ಥಿಗಳು, ಪ್ರವಾಸಿಗರು, ಸಾಧುಗಳು ಮತ್ತು ಇತರರು ಭಾಗವಹಿಸುತ್ತಾರೆ ಅಸ್ಸಾಂ ರಾಜ್ಯ ಪ್ರವಾಸೋದ್ಯಮದ ಪ್ರಕಾರ, ಕನಿಷ್ಠ 5 ಲಕ್ಷ ಭಕ್ತರು ಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಕಾಮಾಖ್ಯ ದೇವಸ್ಥಾನ : * ನಿಲಾಚಲ್ ಬೆಟ್ಟದಲ್ಲಿರುವ ಹಿಂದೂ ದೇವಾಲಯವನ್ನು ಇತಿಹಾಸದ ಪ್ರಕಾರ ರಾಜ ನರಕಸುರನು ನಿರ್ಮಿಸಿದನು. 1565 ರಿಂದ ಲಭ್ಯವಿರುವ ಅಧಿಕೃತ ದಾಖಲೆಗಳ ಪ್ರಕಾರ, ಈ ದೇವಾಲಯವನ್ನು ಕೋಚ್ ರಾಜ ನಾರನಾರಾಯಣ್ ಅವರು ಪುನರ್ನಿರ್ಮಿಸಿದರು. * ಕಾಮಖ್ಯಾ 51 ಶಕ್ತಿ ಪೀಠಗಳಲ್ಲಿ ಒಂದಾಗಿದೆ (51 ಶಕ್ತಿ ಪೀಠಗಳಲ್ಲಿ ಪ್ರತಿಯೊಂದೂ ಶಿವನ ಸಹಚರ ಸತಿಯ ದೇಹದ ಭಾಗವನ್ನು ಪ್ರತಿನಿಧಿಸುತ್ತದೆ).