Job Description: ಭಾರತದಲ್ಲಿ ಕೋರೋಣ ಸೋಂಕು ಹಬ್ಬುವ ಭೀತಿಯಿಂದ ಬಹುತೇಕ ಎಲ್ಲ ರಾಜ್ಯಗಳು ಶಾಲೆಗಳಿಗೆ ರಜೆಯನ್ನು ಘೋಷಿಸಿವೆ. ಈ ನಡುವೆ ತ್ರಿಪುರಾ ರಾಜ್ಯ ಸರ್ಕಾರವು 2020 ರ ಜೂನ್ 25 ರಿಂದ ಶಾಲಾ ವಿದ್ಯಾರ್ಥಿಗಳಿಗೆ ಒಂದು ನೂತನ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದೆ. ಈ ಯೋಜನೆಗೆ ‘ಏಕ್ತು ಖೇಲೋ, ಏಕ್ತು ಪಾಧೋ’ (ಕಡಿಮೆ ಆಟವಾಡಿ, ಕಡಿಮೆ ಓದಿ)ಎಂದು ಹೆಸರಿಡಲಾಗಿದೆ. ಏನೀ ಯೋಜನೆ ? : ಈ ನೂತನ ಯೋಜನೆಯಡಿ ಪ್ರತಿದಿನ ಬೆಳಿಗ್ಗೆ, ರಾಜ್ಯದ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಯಿಂದ ಕಲಿಕೆಯ ವಿಷಯಗಳನ್ನು ಪ್ರತಿ ಜಿಲ್ಲೆಯ ಶೈಕ್ಷಣಿಕ ಸಂಯೋಜಕರ ಸಾಮಾಜಿಕ ಮಧ್ಯವಾದ ವಾಟ್ಸ್ಆಪ್ ಮೂಲಕ ಅಥವಾ SMS ಮೂಲಕ ಹಂಚಲಾಗುವದು. ನಂತರ ಜಿಲ್ಲೆಯ ಸಂಯೋಜಕರು ಆ ನಿರ್ದಿಷ್ಟ ಜಿಲ್ಲೆಯಲ್ಲಿರುವ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಹಂಚಿಕೊಳ್ಳುತ್ತಾರೆ. ಇನ್ನು ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರೊಂದಿಗೆ ಹಾಗು ಅಂತಿಮವಾಗಿ ಶಿಕ್ಷಕರು ಶಾಲೆಯ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿಗೆ ವಿಷಯವನ್ನು ಹಂಚಿಕೊಳ್ಳುತ್ತಾರೆ. * ಈ ಯೋಜನೆಯಿಂದ ತ್ರಿಪುರ ರಾಜ್ಯದಾದ್ಯಂತ 4,398 ಸರ್ಕಾರಿ ಅನುದಾನಿತ ಮತ್ತು 335 ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.