Job Description: ನವದೆಹಲಿ: ಇತ್ತೀಚಿಗೆ ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾ ಬಳಿಯ ಭಾರತದ ಭಾಗವನ್ನು ತನ್ನದೆಂದು ಹೇಳಿಕೊಂಡು ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದ ನೆರೆಯ ನೇಪಾಳ ರಾಷ್ಟ್ರವು, ಇದೀಗ ಭಾರತೀಯರಿಗಾಗಿ ಹೊರ ಪೌರತ್ವ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. * ಈ ನೂತನ ಕಾಯ್ದೆಯ ಪ್ರಕಾರ ನೇಪಾಳದ ಹುಡುಗನನ್ನು ಮದುವೆಯಾದ ಭಾರತೀಯ ಯುವತಿಗೆ ಏಳು ವರ್ಷಗಳ ಬಳಿಕ ನೇಪಾಳದ ಪೌರತ್ವ ದೊರೆಯಲಿದೆ. * ಭಾರತದಲ್ಲಿ ಜಾರಿಯಲ್ಲಿರುವ ಪೌರತ್ವ ಕಾಯ್ದೆಯ ಪ್ರಕಾರ ನೇಪಾಳದ ಯುವತಿಯರಿಗೆ ಅವರು ಮದುವೆಯಾದ ದಿನದಿಂದಲೇ ಅವರಿಗೆ ಭಾರತದ ಪೌರತ್ವ ದೊರೆಯುತ್ತದೆ. ಆದರೆ ಇದು ಬೇರೆ ದೇಶಗಳ ಯುವತಿಯರಿಗೆ ಅನ್ವಯಿಸುವದಿಲ್ಲ. ಬೇರೆ ರಾಷ್ಟ್ರಗಳ ಯುವತಿಯರಿಗೆ ಅವರು ಮದುವೆಯಾದ 7 ವರ್ಷಗಳ ನಂತರ ಭಾರತೀಯ ಪೌರತ್ವ ನೀಡಲಾಗುತ್ತಿದೆ.