Job Description: ವಾಷಿಂಗ್ಟನ್: ಅಮೆರಿಕಾದ ನ್ಯಾಷನಲ್ ಸೈನ್ಸ್ ಫೌಂಡೇಷನ್‌ನ (NSF) ನಿರ್ದೇಶಕರನ್ನಾಗಿ ಭಾರತ ಮೂಲದ ಅಮೆರಿಕ ವಿಜ್ಞಾನಿಯಾದ ಡಾ.ಸೇತುರಾಮನ್ ಪಂಚನಾಥನ್‌ಅವರನ್ನು ನೇಮಿಸಲು ಅಮೇರಿಕಾ ಸೆನೆಟ್ ಅನುಮೋದಿಸಿದೆ. * ಇದೆ ಜುಲೈ 6ರಂದು ಸೇತು ರಾಮನ್ ಅವರು NSF ನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. * ಅಮೆರಿಕದ ನ್ಯಾಷನಲ್ ಸೈನ್ಸ್ ಫೌಂಡೇಷನ್ ವಿಜ್ಞಾನ ಮತ್ತು ಎಂಜಿನಿಯರಿಂಗ್‌ಗೆ ಸಂಬಂಧಿಸಿದಂತೆ ವೈದ್ಯಕೀಯೇತರ ವಿಭಾಗಗಳಲ್ಲಿ ಮೂಲಭೂತ ಸಂಶೋಧನೆಗಳಿಗೆ ಪ್ರೋತ್ಸಾಹ ಒದಗಿಸುತ್ತದೆ. * ಅಮೇರಿಕಾ ದೇಶದ ಪ್ರತಿಷ್ಠಿತ ಸಂಸ್ಥೆಯಾದ NSFನ ವಾರ್ಷಿಕ ಬಜೆಟ್ ಸುಮಾರು ₹ 56,426 ಕೋಟಿ (7.4 ಶತಕೋಟಿ ಡಾಲರ್).