Job Description: ಲಂಡನ್ : ಭಾರತ ಸಂಜಾತ ಉದ್ಯಮಿ ಲಾರ್ಡ್ ಕರಣ್ ಬಿಲಿಮೊರಿಯಾ ಅವರು ಸುಮಾರು 1.90 ಲಕ್ಷ ಸದಸ್ಯರನ್ನು ಒಳಗೊಂಡ ಕಾನ್ಫಡರೇಷನ್ ಆಫ್ ಬ್ರಿಟಿಷ್ ಇಂಡಸ್ಟ್ರಿ (ಬ್ರಿಟಿಷ್ ಕೈಗಾರಿಕಾ ಮಹಾಒಕ್ಕೂಟ) ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಯುಕೆ-ಇಂಡಿಯಾ ಬಿಸಿನೆಸ್ ಕೌನ್ಸಿಲ್‌ನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. * 58 ವರ್ಷ ಪ್ರಾಯದ ಕರಣ್ ಅವರು ಕೋಬ್ರಾ ಬಿಯರ್ ಕಂಪನಿಯ ಸಂಸ್ಥಾಪಕರಾಗಿದ್ದು, ಕಳೆದ ವರ್ಷ ಮಹಾಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.