Job Description: ನವದೆಹಲಿ : ಭಾರತ ಮತ್ತು ಚೀನಾ ನಡುವಿನ Line of control (LAC) ನಲ್ಲಿ ಹಿಂಸಾಚಾರ ಮತ್ತು ಸಾವುಗಳ ವರದಿಗಳ ಬಗ್ಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಆತಂಕ ವ್ಯಕ್ತಪಡಿಸಿದ್ದು, ಉಭಯ ರಾಷ್ಟ್ರಗಳಿಗೆ ಗರಿಷ್ಠ ಸಂಯಮ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ನಾವು ವರದಿಗಳನ್ನು ಸಕಾರಾತ್ಮಕವಾಗಿ ಗಮನಿಸುತ್ತೇವೆ. ಭಾರತ ಮತ್ತು ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‍ಎಸಿ) ಹಿಂಸಾಚಾರ ಮತ್ತು ಸಾವುಗಳ ವರದಿಗಳ ಬಗ್ಗೆ ನಾವು ಕಳವಳ ಹೊಂದಿದ್ದೇವೆ ಮತ್ತು ಗರಿಷ್ಠ ಸಂಯಮವನ್ನು ನಿರ್ವಹಿಸುವಂತೆ ಎರಡೂ ಕಡೆಯವರನ್ನು ಒತ್ತಾಯಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.