Job Description: ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ GST ಕೌನ್ಸಿಲ್ ಸಭೆ ನಡೆಯಿತು. ಈ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು. * ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡ ವ್ಯಾಪಾರಿಗಳ ವಿಳಂಬ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಅಲ್ಲದೆ ತೆರಿಗೆ ಪಾವತಿಸದವರಿಗೆ ವಿಳಂಬ ಶುಲ್ಕವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. * ವಾರ್ಷಿಕವಾಗಿ 5 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಸುವ ವ್ಯಾಪಾರಿಗಳ ವಿಳಂಬವಾಗಿ ವಿಳಂಬವಾಗಿ ಸಲ್ಲಿಸುವ ಜಿಎಸ್ಟಿ ರಿಟರ್ನ್ ಗೆ ವಿಧಿಸುತ್ತಿದ್ದ ಬಡ್ಡಿಯನ್ನು ಶೇಕಡ 50 ರಷ್ಟು ಕಡಿತಗೊಳಿಸಲಾಗಿದೆ. * ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ GST ರಿಟರ್ನ್ ಸಲ್ಲಿಕೆ ವಿಳಂಬ ಮಾಡಿದವರಿಗೆ ವಿಧಿಸಲಾಗುತ್ತಿದ್ದ ಬಡ್ಡಿಯನ್ನು ಶೇಕಡ 18 ರಿಂದ ಶೇಕಡ 9 ಕ್ಕೆ ಇಳಿಕೆ ಮಾಡಲಾಗಿದೆ. ಇದು ಸೆಪ್ಟಂಬರ್ ತಿಂಗಳವರೆಗೂ ಇದು ಅನ್ವಯವಾಗಲಿದೆ.