Job Description: ನವದೆಹಲಿ / ವಾಷಿಂಗ್ಟನ್ : ಭಾರತ ಮೂಲದ ಅಮೆರಿಕದ ಮಣ್ಣು ವಿಜ್ಞಾನಿ ಡಾ| ರತನ್ ಲಾಲ್ ಅವರನ್ನು ಈ ವರ್ಷದ ಕೃಷಿ ಕ್ಷೇತ್ರದ ನೊಬೆಲ್ ಎಂದೇ ಪ್ರಸಿದ್ದವಾಗಿರುವ ಪ್ರತಿಷ್ಠಿತ ವಿಶ್ವ ಆಹಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ | ರತನ ಲಾಲ್ ಅವರು ಭಾರತೀಯ ಶಾಸ್ತ್ರ, ಪುರಾಣಗಳಿಂದ ಸ್ಫೂರ್ತಿ ಪಡೆದು ಮಣ್ಣಿನ ಗುಣಮಟ್ಟ ಸಂರಕ್ಷಣೆಗಾಗಿ ರೂಪಿಸಿದ ಮಾದರಿಗಳು ಸಣ್ಣ ರೈತರಿಗೆ ಬಹು ಉಪಯುಕ್ತವಾಗಿವೆ. ಅಲ್ಲದೆ ಇವರ ನೀಡಿರುವ ಸಲಹೆಗಳು ವಿಶ್ವವ್ಯಾಪ್ತಿ ಆಹಾರ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗಿರುವದನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ. * ಈ ಮೊದಲು 1987ರಲ್ಲಿ ದೇಶದ ಹಸಿರು ಕ್ರಾಂತಿಯ ಪಿತಾಮಹರೆಂದೇ ಕರೆಸಿಕೊಳ್ಳುವ ಡಾ| ಎಂ.ಎಸ್. ಸ್ವಾಮಿನಾಥನ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.