Job Description: ಡೆಹ್ರಾಡೂನ್: ಉತ್ತರಾಖಂಡದ ಭರಾರಿಸೈನ್ (ಗೈರ್‌ಸೈನ್) ನಗರವನ್ನು ರಾಜ್ಯದ ಬೇಸಿಗೆ ರಾಜಧಾನಿ ಎಂದು ಘೋಷಿಸಲಾಗಿದೆ. ಚಾಮೋಲಿ ಜಿಲ್ಲೆಯ ಗೈರ್‌ಸೈನ್‌ನಿಂದ 14 ಕಿ.ಮೀ. ದೂರದಲ್ಲಿರುವ ಭರಾರಿಸೈನ್ ನಗರವನ್ನು ಉತ್ತರಾಖಂಡದ ಬೇಸಿಗೆ ರಾಜಧಾನಿಯನ್ನಾಗಿ ಘೋಷಿಸಿ ಉತ್ತರಾಖಂಡ ರಾಜ್ಯ ಸರಕಾರ ಅಧಿಸೂಚಿಸಿದೆ ಇದಕ್ಕೆ ರಾಜ್ಯಪಾಲರು ಕೂಡ ಅನುಮೋದನೆ ನೀಡಿದ್ದಾರೆ. ಭರಾರಿಸೈನ್ ನಗರದಲ್ಲಿ ಈಗಾಗಲೇ ಹಲವಾರು ವಿಧಾನಸಭಾ ಕಲಾಪಗಳನ್ನು ಆಯೋಜಿಸಲಾಗಿದ್ದು, ಇದೀಗ ಈ ನಗರವನ್ನು ಅಧಿಕೃತವಾಗಿ ಬೇಸಿಗೆ ರಾಜದಾನಿಯನ್ನಾಗಿಸಿದೆ. ಅಲ್ಲದೆ ಪ್ರಸ್ತುತ ರಾಜಧಾನಿಯಾಗಿರುವ ಡೆಹ್ರಾಡೂನ್ ನಗರವನ್ನು ಚಳಿಗಾಲದ ರಾಜಧಾನಿಯಾಗಿ ಮುಂದುವರೆಸಲಾಗುವದು. * 2000 ನೇ ವರ್ಷದಲ್ಲಿ ಉತ್ತರಪ್ರದೇಶ ರಾಜ್ಯದ ಹಿಮಾಲಯ ಪರ್ವತ ಪ್ರಾಂತ್ಯವನ್ನು ಬೇರ್ಪಡಿಸಿ ಉತ್ತರಾಖಂಡ ರಾಜ್ಯವನ್ನು ರಚಿಸಲಾಗಿತ್ತು.