Job Description: ಬೆಂಗಳೂರು :ಪ್ರತಿಷ್ಠಿತ ಟೈಮ್ಸ್ ಗ್ರೂಪ್ ಕೋರೋಣ ಲಾಕ್ ಡೌನ್ ಸಮಯದಲ್ಲಿ ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ, ಕೊರೋನಾ ಬಗೆಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡ ಅರ್ಹ ವ್ಯಕ್ತಿಯನ್ನು ಗುರುತಿಸಿ "ಕೊರೋನಾ ವಾರಿಯರ್ ಅವಾರ್ಡ್" ನೀಡಿದೆ. ಟೈಮ್ಸ್ ಗ್ರೂಪ್ ನೀಡುವ ಈ ಪ್ರಶಸ್ತಿಯನ್ನು ಅಗರ್ವಾಲ್ ಸಮಾಜದ ಅಧ್ಯಕ್ಷರಾದ ಸಂಜಯ್ ರಾಮವತಾರ್ ಗಾರ್ಗ್ ಅವರಿಗೆ ದೊರೆತಿದೆ. ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾದ ಜನರಿಗೆ ಅಗರ್ವಾಲ್ ಸಮಾಜದ ಸಂಜಯ್ ರಾಮವತಾರ್ ಗಾರ್ಗ್ ಒದಗಿಸಿದ ಸಾಮಾಜಿಕ ಕಾರ್ಯವನ್ನು ಗಮನಿಸಿದ ಸಿಎಸ್‌ಆರ್ ಟೈಮ್ಸ್ ಮತ್ತು ಇಂಡಿಯಾ ಅಚೀವರ್ ಫಾರ್ಮ್, ಕೋವಿಡ್-19 ವಾರಿಯರ್ ಅವಾರ್ಡ್ ನೀಡಿ ಗೌರವಿಸಿದೆ. ಈ ಮೂಲಕ ಸಿಎಸ್‌ಆರ್ ಟೈಮ್ಸ್ ಪ್ರಶಸ್ತಿಯನ್ನು ಬೆಂಗಳೂರಿನ ಅಗರ್ವಾಲ್ ಸಮಾಜ ಪಡೆದಿದೆ.