Job Description: ದೆಹಲಿ: ಬಯೋಕಾನ್ ಕಂಪನಿಯ ಕಾರ್ಯನಿರ್ವಾಹಕ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ ಅವರಿಗೆ 2020ನೇ ಸಾಲಿನ ಪ್ರತಿಷ್ಠಿತ ಇವೈ(EY) ವಿಶ್ವದ ವರ್ಷದ ಉದ್ಯಮಿ ಪ್ರಶಸ್ತಿ ಲಭಿಸಿದೆ. * ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ಈ ಪ್ರಶಸ್ತಿಗೆ ಭಾಜನರಾದ ಮೂರನೇ ಭಾರತೀಯ ವ್ಯಕ್ತಿ ಇವರಾಗಿದ್ದಾರೆ. * ಕೊಟಕ್ ಮಹೀಂದ್ರಾ ಬ್ಯಾಂಕ್ ನ ಉದಯ್ ಕೊಟಕ್ (2014) ಮತ್ತು ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ನ ನಾರಾಯಣ ಮೂರ್ತಿ (2005) ಈ ಪ್ರಶಸ್ತಿ ಪಡೆದಿದ್ದರು. * 2011ರಲ್ಲಿ ಸಿಂಗಪುರದ ಹೈಫ್ಲಕ್ಸ್ ಲಿಮಿಟೆಡ್‌ನ ಒಲಿವಿಯಾ ಲುಮ್ ಅವರ ನಂತರ ಈ ಪ್ರಶಸ್ತಿಯನ್ನು ಪಡೆದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಮಜುಂದಾರ್ ಶಾ ಪಾತ್ರರಾಗಿದ್ದಾರೆ. * 67 ವರ್ಷದ ಕಿರಣ್ ಮಜುಂದಾರ್-ಶಾ 1978 ರಲ್ಲಿ ಕೇವಲ ಇಬ್ಬರು ಉದ್ಯೋಗಿಗಳು ಮತ್ತು 500 ಡಾಲರ್ದೊಂದಿಗೆ ಬಯೋಕಾನ್ ಕಂಪನಿಯನ್ನು ಸ್ಥಾಪಿಸಿದರು.