Job Description: ಚಾಮರಾಜನಗರ: ಇಡೀ ದಕ್ಷಿಣ ಭಾರತದಲ್ಲಿ ಪ್ರಸ್ತುತ ಎರಡೇ ಎರಡು ಜಿಲ್ಲೆಗಳು ಕೋವಿಡ್ ಸೋಂಕಿನ ಭೀತಿಯಿಂದ ಮುಕ್ತವಾಗಿವೆ. ಆ ಎರಡು ಜಿಲ್ಲೆಗಳೆಂದರೆ ಒಂದು ಕರ್ನಾಟಕದ ಚಾಮರಾಜನಗರ ಮತ್ತು ತೆಲಂಗಾಣದ ವಾರಂಗಲ್ ಗ್ರಾಮಾಂತರ. * ಚಾಮರಾಜನಗರ ಜಿಲ್ಲೆ ಕರ್ನಾಟಕದ ಏಕೈಕ ಕೋವಿಡ್ ಮುಕ್ತ ಜಿಲ್ಲೆ ಎಂಬುದು ಖಚಿತವಾಗಿದೆ. * ದಕ್ಷಿಣ ಭಾರತದಲ್ಲಿ ಕೇವಲ ಎರಡು ಜಿಲ್ಲೆಗಳು ಮಾತ್ರ ಕೋವಿಡ್ ಮುಕ್ತ ವಾಗಿದ್ದು, ದಕ್ಷಿಣ ಭಾರತದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳದ ಎಲ್ಲ ಜಿಲ್ಲೆಗಳಲ್ಲೂ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. * ಕರ್ನಾಟಕದ ಏಕೈಕ ಕೋವಿಡ್ ಮುಕ್ತ ಜಿಲ್ಲೆಯಾದ ಚಾಮರಾಜನಗರ ತೆಲಂಗಾಣದ ವಾರಂಗಲ್ ಗ್ರಾಮಾಂತರ ಜಿಲ್ಲೆಯ ಜೊತೆ ಈ ಗೌರವ ಹಂಚಿಕೊಳ್ಳುವ ಮೂಲಕ ಅಪರೂಪದ ಸಾಧನೆ ಮಾಡಿದೆ.