Job Description: ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಇದೆ ಜೂನ್ 04 ರಂದು ಇದೆ ಮೊದಲ ಬಾರಿ ವೀಡಿಯೊ ಕಾನ್ಫರೆನ್ಸ್ ಮೂಲಕ ವರ್ಚುಯಲ್ ಶೃಂಗಸಭೆಯ ನಡೆಸಿದರು. ಈ ಸಭೆಯ ಬಳಿಕ ಪರಸ್ಪರ ಸಹಕಾರಕ್ಕಾಗಿ ಸೇನಾನೆಲೆಗಳಿಗೆ ಪ್ರವೇಶಾವಕಾಶ ಸೇರಿ 6 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಯಿತು. * ಭಾರತದ ಆಸ್ಟ್ರೇಲಿಯಾದೊಂದಿಗೆ ಮಾಡಿಕೊಂಡ ಈ ಒಪ್ಪಂದದಿಂದ ಉಭಯ ದೇಶಗಳ ನಡುವಿನ ಪರಸ್ಪರರ ಸೇನಾನೆಲೆಗಳನ್ನು ದುರಸ್ತಿ, ಪೂರೈಕೆ, ಮರುಪೂರಣ ಪ್ರಕ್ರಿಯೆಗೆ ಬಳಸಿಕೊಳ್ಳಲು ನೆರವಾಗುವುದಲ್ಲದೆ, ಸಮಗ್ರ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಅನುಕೂಲವಾಗಲಿದೆ. * ಭಾರತವು ಈಗಾಗಲೇ ಇದೇ ರೀತಿಯ ಒಪ್ಪಂದವನ್ನು ಅಮೆರಿಕ, ಫ್ರಾನ್ಸ್ ಮತ್ತು ಸಿಂಗಾಪುರ ರಾಷ್ಟ್ರಗಳೊಂದಿಗೆ ಮಾಡಿಕೊಂಡಿದೆ.