Job Description: ಹೊಸದಿಲ್ಲಿ: ಏಷ್ಯಾ ವಿಶ್ವ ವಿದ್ಯಾಲಯಗಳ ರ್‍ಯಾಂಕಿಂಗ್ ಪಟ್ಟಿ ಇತ್ತೀಚಿಗೆ ಬಿಡುಗಡೆಯಾಗಿದ್ದು, ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯು 36ನೇ ರ್‍ಯಾಂಕ್ ಗಳಿಸುವ ಮೂಲಕ ಭಾರತದ ವಿವಿಗಳ ಪೈಕಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಅಲ್ಲದೆ ಭಾರತದ ಇತರೆ ಆರು ಐಐಟಿಗಳು ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. * ಬೆಂಗಳೂರಿನ IISc ಸತತ ಐದನೇ ವರ್ಷ ಭಾರತದ ಶಿಕ್ಷಣ ಸಂಸ್ಥೆಗಳ ಪೈಕಿ ಅಗ್ರ ಸ್ಥಾನ ಪಡೆದಿದ್ದರು ಕಾಯ್ದುಕೊಂಡಿದ್ದರೂ 2019ಕ್ಕೆ ಹೋಲಿಸಿದರೆ 7 ಸ್ಥಾನಗಳಷ್ಟು ಕುಸಿತ ಕಂಡಿದೆ. * ಭಾರತದ IITಗಳ ಪ್ರದರ್ಶನ ಕೂಡ ಕಡಿಮೆಯಿದ್ದು, ರೂಪರ್ (47), ಖಾನ್ಪುರ (59), ಇಂದೋರ್ (55), ದಿಲ್ಲಿ (65), ಮುಂಬಯಿ (69), ರೂರ್ಕಿ (83) ಐಐಟಿಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. * ಅಗ್ರ ಹತ್ತು ಸ್ಥಾನಗಳನ್ನು ಚೀನ, ಸಿಂಗಾಪುರ, ಹಾಂಗ್‌ಕಾಂಗ್, ಜಪಾನ್ ಮತ್ತು ದಕ್ಷಿಣ ಕೊರಿಯಾದ ವಿವಿಗಳು ಪಡೆದಿವೆ.