Job Description: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಎಲೆಕ್ಟ್ರಾನಿಕ್ಸ್ ಕ್ಷೇತ್ರವನ್ನು ಹೆಚ್ಚಿಸಲು ಮೂರು ಹೊಸ ಯೋಜನೆಗಳನ್ನು ಉದ್ಘಾಟಿಸಿದರು. ಇವುಗಳೆಂದರೆ 1) ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆ (Production Linked Incentive Scheme) 2) ಕ್ಲಸ್ಟರ್ ಯೋಜನೆ (EMC 2.0) ಮತ್ತು 3) ಘಟಕ ಉತ್ಪಾದನಾ ಯೋಜನೆ (SPECS). * ಈ ಯೋಜನೆಗಳನ್ನು ಕೇಂದ್ರ ಸಚಿವ ಸಂಪುಟ 2020 ರ ಮಾರ್ಚ್ ತಿಂಗಳಲ್ಲಿ ಅಂಗೀಕರಿಸಿತ್ತು. * ಈ ಯೋಜನೆಗಳಿಂದ ಬಂಡವಾಳ ಹೂಡಿಕೆಯನ್ನು ನಿರೀಕ್ಷಿಸಬಹುದಾಗಿದೆ. 2025 ರ ವೇಳೆಗೆ ಮೊಬೈಲ್ ಫೋನ್ ಮತ್ತು ಅವುಗಳ ಭಾಗಗಳ ಉತ್ಪಾದನೆ ಸುಮಾರು 10 ಲಕ್ಷ ಕೋಟಿಗಳ ವರೆಗೂ ಹೆಚ್ಚಲಿದೆ. ಜೊತೆಗೆ, ಈ ಯೋಜನೆಯಿಂದ 5 ಲಕ್ಷ ನೇರ ಮತ್ತು 15 ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಯಾಗುವ ನಿರೀಕ್ಷೆಯಿದೆ.