Job Description: ಕೇಂದ್ರ ಸರ್ಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಕಿರೆನ್ ರಿಜ್ಜು ಅವರು "ಭಾರತ ಸಮುದಾಯ ಕೋಚ್ ಅಭಿವೃದ್ಧಿ" ಕಾರ್ಯಕ್ರಮವನ್ನು ಇದೆ ದಿನಾಂಕ ಜೂನ್ 02 ರಂದು ಉದ್ಘಾಟಿಸಿದರು. ಭಾರತ ಸಮುದಾಯ ಕೋಚ್ ಅಭಿವೃದ್ಧಿ ಕಾರ್ಯಕ್ರಮ: ಭಾರತ ಸಮುದಾಯ ತರಬೇತುದಾರ ಅಭಿವೃದ್ಧಿ ಕಾರ್ಯಕ್ರಮವು ದೇಶಾದ್ಯಂತ ಸಮುದಾಯ ತರಬೇತುದಾರರು ಮತ್ತು ದೈಹಿಕ ಶಿಕ್ಷಕರಿಗೆ 25 ದಿನಗಳ ಸುದೀರ್ಘ ಕಾರ್ಯಕ್ರಮವಾಗಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. * ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಸಮುದಾಯ ತರಬೇತುದಾರರು ಪ್ರತಿ ಮಗುವನ್ನು ಫಿಟ್‌ನೆಸ್ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರೇಪಿಸುತ್ತಾರೆ.