Job Description: ವಿಶ್ವಸಂಸ್ಥೆ: ಕೋವಿಡ್-19 lockdown ಹಾಗೂ ಹರಡುವಿಕೆಯನ್ನು ತಡೆಯಲು ನೂತನ ಮತದಾನ ವ್ಯವಸ್ಥೆಯಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಐದು ಸ್ಥಾನಗಳಿಗೆ ಬರುವ ತಿಂಗಳು ಚುನಾವಣೆ ನಡೆಯಲಿದೆ. ಹಾಗೂ ಈ ಚುನಾವಣೆಯಲ್ಲಿ ಭಾರತಕ್ಕೆ ಗೆಲುವು ಬಹುತೇಕ ನಿಚ್ಚಳವಾಗಿದೆ. 193 ಸದಸ್ಯರ ಸಾಮಾನ್ಯ ಸಭೆಯು 'ಕೋವಿಡ್-19 ಸಮಯದಲ್ಲಿ ಸಮಗ್ರ ಸಭೆಯಾ ಹೊರತಾಗಿ ರಹಸ್ಯ ಮತದಾನದ ಮೂಲಕ ಚುನವಣೆ ನಡೆಸುವ ವಿಧಾನ' ಅಂಗೀಕರಿಸಿತು. 2021-22ರ ಸಾಲಿನ 15 ರಾಷ್ಟ್ರಗಳ ಮಂಡಳಿಗೆ 5 ಕಾಯಂ ಸದಸ್ಯರ ಚುನಾವಣೆಯನ್ನು ಜೂನ್ 17ಕ್ಕೆ ನಿಗದಿಪಡಿಸಲಾಗಿದ್ದು. * ಏಷ್ಯಾ ಫೆಸಿಫಿಕ್‌ನಿಂದ ಸ್ಪರ್ಧಿಸುತ್ತಿರುವ ಏಕೈಕ ರಾಷ್ಟ್ರ ಭಾರತವಾಗಿದ್ದು, ಗೆಲುವು ಖಚಿತವಾಗಿದೆ.