Job Description: ನವದೆಹಲಿ: ಫೋಬ್ಸ್ ನಿಯತಕಾಲಿಕ ವಿಶ್ವದ ಅತ್ಯಂತ ಶ್ರೀಮಂತ ನೂರು ಕ್ರೀಡಾಪಟುಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ನೂರು ಆಟಗಾರರ ಪಟ್ಟಿಯಲ್ಲಿ ಭಾರತದಿಂದ ಸ್ಥಾನ ಪಡೆದ ಏಕೈಕ ಕ್ರೀಡಾಪಟುವಾಗಿ ವಿರಾಟ ಕೊಹ್ಲಿ ಹೊರಹೊಮ್ಮಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿರುವ ಕೊಹ್ಲಿಯವರು ಕಳೆದ ಒಂದು ವರ್ಷದಲ್ಲಿ ಗಳಿಸಿರುವ ಆದಾಯ ಸುಮಾರು 26 ಮಿಲಿಯನ್ ಡಾಲರ್ (ಅಂದಾಜು 196 ಕೋಟಿ ರೂ.) ಆಗಿದ್ದು, ಇದರಲ್ಲಿ 24 ಮಿಲಿಯನ್ ಗಳಿಕೆಯನ್ನು ಜಾಹೀರಾತುಗಳ ಮೂಲಕ ಮತ್ತು 2 ಮಿಲಿಯನ್ ಡಾಲರ್ ಹಣವನ್ನು ಸಂಬಳ ಹಾಗೂ ಪ್ರಶಸ್ತಿ ಮೊತ್ತವಾಗಿದೆ ಎಂದು ಫೋಬ್ಸ್ ತಿಳಿಸಿದೆ. ಕಳೆದ ವರ್ಷದೊಂದಿಗೆ ಹೋಲಿಸಿದರೆ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಭಾರಿ ಏರಿಕೆ ಕಂಡಿದ್ದು, 30 ಸ್ಥಾನ ಬಡ್ತಿಪಡೆದು 66ನೇ ಸ್ಥಾನದಲ್ಲಿದ್ದಾರೆ. ಹಾಗೂ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕ್ರಿಕೆಟಿಗ ಇವರಾಗಿದ್ದಾರೆ. * ಮೊದಲ ಬಾರಿಗೆ ಟೆನಿಸ್ ಆಟಗಾರ ರೋಜರ್ ಫೆಡರರ್ 802 ಕೋಟಿ ರೂ. ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. * 793 ಕೋಟಿ ರೂ.ಗಳೊಂದಿಗೆ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೋ ರೊನಾಲ್ಡೊ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. * ಲಿಯೊನೆಲ್ ಮೆಸ್ಸಿ 785 ಕೋಟಿ ರೂ.ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. * ಬ್ರೆಜಿಲ್ನ ನೇಮಾರ್ 721 ಕೋಟಿ ರೂ. ಒಡೆಯರಾಗಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.