Job Description: ಭಾರತದ ಪ್ರಮುಖ ಐಟಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗಿರುವ ವಿಪ್ರೊ ಸಂಸ್ಥೆಯು ಥಿಯೆರ‍್ರಿ ಡೆಲಾಪೋರ್ಟ್ ಅವರನ್ನು ತನ್ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಈ ಮೂಲಕ ವಿಪ್ರೋ ಸಂಸ್ಥೆಯು ಮೊದಲ ಬಾರಿ ಭಾರತೀಯೇತರ CEO ಯನ್ನು ನೇಮಿಸಿದಂತಾಗಿದೆ. ಥಿಯೆರ‍್ರಿ ಡೆಲಾಪೋರ್ಟ್ ಅವರು ಈ ಮೊದಲು ಕ್ಯಾಪಜೆಮಿನಿ ಸಂಸ್ಥೆಯಲ್ಲಿ 25 ವರ್ಷಗಳಿಂದ ಸೇವೆಯಲ್ಲಿಯಲ್ಲಿದ್ದರು. ಇವರು ಜುಲೈ 6ರಂದು ವಿಪ್ರೊದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.