Job Description: ವಾಷಿಂಗ್ಟನ್: ಜಾಗತಿಕವಾಗಿ ವ್ಯಾಪಿಸಿ ಅಪಾರ ನಷ್ಟ ಉಂಟು ಮಾಡಿರುವ ಕೊರೊನಾ ವೈರಸ್‌ನ ಹರಡುವಿಕೆಯನ್ನು ಆರಂಭದಲ್ಲೇ ತಡೆಯಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಫಲವಾಗಿದೆ ಎಂದು ಅಮೆರಿಕಾವು ಆರೋಪಿಸುತ್ತ ಬಂದಿತ್ತು ಮತ್ತು ತಾನು ನೀಡುತ್ತಿರುವ ಅನುದಾನವನ್ನು ಕಡಿತಗೊಳಿಸಿತ್ತು, ಈ ಹಿನ್ನಲೆ ಪ್ರಸ್ತುತ ವಿಶ್ವ ಅರೋಗ್ಯ ಸಂಸ್ಥೆಯೊಂದಿಗಿನ ಎಲ್ಲ ಸಂಬಂಧವನ್ನು ಕಡಿತಗೊಳಿಸುತ್ತಿರುವದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. 'ವಿಶ್ವ ಅರೋಗ್ಯ ಸಂಸ್ಥೆಯು ಚೀನಾದ ಪರವಾಗಿದ್ದು, ಹೀಗಾಗಿ ನಾವು ಅದರೊಂದಿಗಿನ ನಮ್ಮ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ,' ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.