Job Description: ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್ ವೇಗವನ್ನು ಹೊಂದಿರುವ ರಾಷ್ಟ್ರವಾಗಿ ಆಸ್ಟ್ರೇಲಿಯಾವು ಸಾಧನೆ ಮಾಡಿದೆ. ಪ್ರಸ್ತುತ ನಡೆಸಿದ ಪರೀಕ್ಷೇ ವರದಿಯನುಸಾರ ಇಂಟರ್ನೆಟ್ ಪ್ರತಿ ಸೆಕೆಂಡಿಗೆ 44.2 ಟೆರಾಬೈಟ್ ನಷ್ಟು ವೇಗ ಹೊಂದಿದೆ ಎಂದು ತಿಳಿದು ಬಂದಿದೆ. ಹಾಲಿ ಇರುವ ಬ್ರಾಡ್‌ಬ್ಯಾಂಡ್ ವೇಗಕ್ಕೆ ಹೋಲಿಸಿದರೆ ಈ ವೇಗವು ಸುಮಾರು ಮಿಲಿಯನ್ ಪಟ್ಟು ಹೆಚ್ಚಾಗಿದೆ. ಈ ಇಂಟರ್ನೆಟ್ ವೇಗದಲ್ಲಿ ಬಳಕೆದಾರರು ಕೇವಲ ಒಂದು ಸೆಕೆಂಡ್ ಸಮಯದಲ್ಲಿ HD(ಅಧಿಕ ಗುಣಮಟ್ಟದ) 1,000 ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಪ್ರಸ್ತುತ ಸಿಂಗಾಪುರವು ಜಗತ್ತಿನ ಅತ್ಯಂತ ವೇಗದ ಇಂಟರ್‌ನೆಟ್ ಸೇವೆಯನ್ನು ಹೊಂದಿರುವ ನಗರವಾಗಿದ್ದು ಇಲ್ಲಿನ ಡೌನ್‌ಲೋಡ್ ವೇಗವು ಪ್ರತಿ ಸೆಕೆಂಡಿಗೆ 197.3 ಮೆಗಾಬೈಟ್ಸ್ (ಎಂಬಿಪಿಎಸ್) ಇದೆ.