Job Description: ಬೀಜಿಂಗ್: ಕೋವಿಡ್-19 ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಚೀನಾದ ವಾರ್ಷಿಕ ಸಂಸತ್ ಅಧಿವೇಶನ ಆರಂಭವಾಗಿದ್ದು, 'ಕೊರೊನಾ ಪಿಡುಗಿನಿಂದಾಗಿ ಚೀನಾ ಹಾಗೂ ವಿಶ್ವದ ಆರ್ಥಿಕತೆ ಕುಸಿದ ಹಿನ್ನಲೆ ಅಂತರರಾಷ್ಟ್ರೀಯ ವ್ಯಾಪಾರ ಇಳಿಕೆಯಾಗಿರುವುದರಿಂದ ಸರ್ಕಾರ ಈ ವರ್ಷ ಯಾವುದೇ ಆರ್ಥಿಕ ವೃದ್ಧಿ ದರದ(ಜಿಡಿಪಿ) ಗುರಿ ಹೊಂದಿಲ್ಲ' ಎಂದು ಚೀನಾ ಪ್ರಧಾನಿ ಲಿ ಕೆಚಾಂಗ್ ತಿಳಿಸಿದ್ದಾರೆ. ಕೊರೊನಾ ದಾಳಿಯಿಂದಾಗಿ ಬರುವ ದಿನಗಳ ಬೆಳವಣಿಗೆಗಳನ್ನು ಊಹಿಸಲು ಅಸಾಧ್ಯ. ಹೀಗಾಗಿ ಜಿಡಿಪಿ ಗುರಿ ಇರಿಸಿಲ್ಲ. 2018 ವರ್ಷಕ್ಕೆ ಹೋಲಿಸಿದರೆ 2019ರಲ್ಲಿ GDP ಶೇ 6.1ರಷ್ಟು ಹೆಚ್ಚಾಗಿದೆ. ಜೊತೆಗೆ ದೇಶದಲ್ಲಿ ಸುಮಾರು 1.35 ಕೋಟಿ ಉದ್ಯೋಗವನ್ನು ಸೃಷ್ಟಿಯಾಗಿದ್ದಲ್ಲದೆ ನಿರುದ್ಯೋಗ ಪ್ರಮಾಣ ಶೇಕಡಾ 5.3 ರಷ್ಟು ಕಡಿಮೆಯಾಗಿದೆ ಎಂದು ಚೀನಾ ಪ್ರಧಾನಿ ತಿಳಿಸಿದರು.