Job Description: ಇಡೀ ದೇಶವೇ ಕೊರೋನಾ ವೈರಸ್‌ನಿಂದಾಗಿ ತತ್ತರಿಸಿರುವ ಬೆನ್ನಲ್ಲೇ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಅಪ್ಪಳಿದ್ದು, ಈ ಚಂಡಮಾರುತಕ್ಕೆ "ಅಂಫಾನ್" ಎಂದು ನಾಮಕರಣ ಮಾಡಲಾಗಿದೆ. ಈ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕೆಲವು ಭಾಗ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ವ್ಯಾಪಿಸಲಿದ್ದು, ಈ ಚಂಡ ಮಾರುತವು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಸಮುದ್ರ ತೀರದಿಂದ ಭೂಪ್ರದೇಶ ಪ್ರವೇಶಿಸಬಹುದು ಎನ್ನಲಾಗಿದೆ. ಜೊತೆಗೆ ಈ ಚಂಡ ಮಾರುತದ ಗಾಳಿಯ ತೀವ್ರತೆ ಗಂಟೆಗೆ 95 ರಿಂದ 105 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.