Job Description: ನವದೆಹಲಿ : ಟೆನಿಸ್ ಆಟಗಾರರಾದ ಅಂಕಿತಾ ರೈನಾ ಮತ್ತು ದಿವಿಜ್ ಶರಣ್ ಹೆಸರುಗಳನ್ನು ಅರ್ಜುನ ಪ್ರಶಸ್ತಿಗಾಗಿ ಆಲ್ ಇಂಡಿಯಾ ಟೆನಿಸ್ ಅಸೋಸಿಯೇಶನ್ (ಎಐಟಿಎ) ಶಿಫಾರಸು ಮಾಡಲಿದೆ. ಜೊತೆಗೆ ಡೇವಿಸ್ ಕಪ್ ಮಾಜಿ ಕೋಚ್ ನಂದನ್ ಬಾಲ್ ಹೆಸರು ಧ್ಯಾನ್ ಚಂದ್ ಪ್ರಶಸ್ತಿಗೆ ನಿರ್ದೇಶನಗೊಳ್ಳಲಿದೆ. * ಅಂಕಿತಾ ರೈನಾ 2019 ರ ಏಷ್ಯನ್ ಗೇಮ್ಸ್‌ನ ಮಹಿಳಾ ಸಿಂಗಲ್ಸ್ ಟೆನಿಸ್‌ನಲ್ಲಿ ಕಂಚಿನ ಪದಕ ಪಡೆದಿದ್ದರು. ಹಾಗೂ ಫೆಡ್‌ಕಪ್‌ನಲ್ಲೂ ಅಮೋಘ ಪ್ರದರ್ಶನ ನೀಡಿದ್ದಲ್ಲದೆ, ಭಾರತ ತಂಡ ಚೊಚ್ಚಲ ಬಾರಿಗೆ ವರ್ಲ್ಡ್ ಗ್ರೂಪ್‌ನಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. * ದೆಹಲಿಯ ದಿವಿಜ್ ಶರಣ್, ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದಿದ್ದ 2018ರ ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ಸ್‌ನಲ್ಲಿ ರೋಹನ್ ಬೋಪಣ್ಣ ಜೊತೆಗೂಡಿ ಚಿನ್ನದ ಪದಕ ಜಯಿಸಿದ್ದರು.