Job Description: ನವದೆಹಲಿ : ಭಾರತ ಸರ್ಕಾರ ಕೃಷಿ ಮೂಲಸೌಕರ್ಯ ಯೋಜನೆಗಳಿಗಾಗಿ 1 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಿದೆ. ಈ ವಿಷಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದಾರೆ. ಪ್ರದಾನ ಮಂತ್ರಿ ಘೋಷಿಸಿದ ಆರ್ಥಿಕ ಪ್ಯಾಕೇಜ್‌ನ ಮೂರನೇ ಹಂತದ ವಿವರಣೆಯನ್ನು ನೀಡಿದ ನಿರ್ಮಲಾ ಸೀತಾರಾಮನ್ ಅವರು ಪ್ರಮುಖವಾಗಿ ಕೃಷಿ ವಲಯದ ಯೋಜನೆಗಳಿಗೆ ಧನಸಹಾಯ ನೀಡಲು 1,00,000 ಕೋಟಿ ರೂ.ಗಳ ಹಣಕಾಸು ಸೌಲಭ್ಯವನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.