Job Description: ನವದೆಹಲಿ: ಕೊರೋನ ವೈರಸ್ ವಿರುದ್ಧ ಹೋರಾಡಲು ದೇಶದಲ್ಲಿ ವಿಧಿಸಿರುವ ಲಾಕ್ ಡೌನ್ ನಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಬಡ ಹಾಗೂ ದುರ್ಬಲ ಕುಟುಂಬಗಳಿಗೆ ಆರ್ಥಿಕ ಹಾಗು ಸಾಮಾಜಿಕ ನೆರವನ್ನು ನೀಡುವ ಭಾರತದ ಪ್ರಯತ್ನಗಳಿಗೆ ಬೆಂಬಲವಾಗಿ ವಿಶ್ವಬ್ಯಾಂಕ್ 1 ಶತಕೋಟಿ ಡಾಲರ್ ( ಸುಮಾರು 7000 ಕೋಟಿ ರೂಪಾಯಿ)ಗಳ ನೆರವನ್ನು ಘೋಷಿಸಿದೆ. ವಿಶ್ವ ಬ್ಯಾಂಕ್ ಭಾರತಕ್ಕೆ ಎರಡು ಹಂತಗಳಲ್ಲಿ ಹಣಕಾಸು ನೆರವು ನೀಡುವುದಾಗಿ ತಿಳಿಸಿದೆ. 2020-21ನೇ ಸಾಲಿನ ಹಣಕಾಸು ವರ್ಷಕ್ಕಾಗಿ ತಕ್ಷಣವೇ 750 ದಶಲಕ್ಷ ಡಾಲರ್ ಮತ್ತು ಎರಡನೆ ಕಂತಿನಲ್ಲಿ 2021-22ನೇ ಹಣಕಾಸು ವರ್ಷಕ್ಕಾಗಿ 250 ದಶಲಕ್ಷ ಡಾಲರ್‌ಗಳನ್ನು ಒದಗಿಸಲಾಗುವುದು ಎಂದು ವಿಶ್ವಬ್ಯಾಂಕ್ ತಿಳಿಸಿದೆ.