Job Description: ಮಧ್ಯಪ್ರದೇಶ ಸರ್ಕಾರವು “ಎಫ್‌ಐಆರ್ ಆಪ್ಕೆ ದ್ವಾರ ಯೋಜನೆ” ಯನ್ನು ಪ್ರಾರಂಭಿಸಿತು. ಮೊದಲಿಗೆ ಪ್ರಾಯೋಗಿಕವಾಗಿ ಒಟ್ಟು 23 ಪೊಲೀಸ್ ಠಾಣೆಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿದೆ. * ಯೋಜನೆಯಡಿ, ಒಬ್ಬ ವ್ಯಕ್ತಿಯು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಬೇಕಾಗಿಲ್ಲ, ಬದಲಿಗೆ ಜನರಿಂದ ದೂರುಗಳನ್ನು ನೋಂದಾಯಿಸಿಕೊಳ್ಳಲು ಮುಖ್ಯ ಪೇದೆಯು ದೂರುದಾರನ ಮನೆಗೆ ಬಂದು ದೂರು ದಾಖಲಿಸಿಕೊಳ್ಳುವರು. * ಈ ಯೋಜನೆಯೊಡನೆ ಮಧ್ಯ ಪ್ರದೇಶದ ರಾಜ್ಯದ ಗೃಹ ಸಚಿವರು “ಡಯಲ್ 112” ಎಂಬ ಸಹಾಯವಾಣಿಯನ್ನು ಸಹ ಪ್ರಾರಂಭಿಸಿದರು. ಇದರಿಂದ ತ್ವರಿತ ಆಂಬ್ಯುಲೆನ್ಸ್ ಸೇವೆಗಳು, ಅಗ್ನಿಶಾಮಕ ಸೇವೆ ಸೇರಿ ವಿವಿಧ ಸೌಲಭ್ಯಗಳನ್ನು ಪಡೆಯಬಹುದಾಗಿದೆ.