Job Description: ಭಾರತದ ವಿವಿಧ ಭಾಗಗಳಲ್ಲಿರುವ ಸುಮಾರು 200 ಕೋವಿಡ್-19 ಪರೀಕ್ಷಾ ಲ್ಯಾಬ್‌ಗಳಿಗೆ COVID-19 ಪರೀಕ್ಷಾ ಕಿಟ್‌ಗಳನ್ನು ತಲುಪಿಸಲು ಭಾರತೀಯ ಅಂಚೆ ಇಲಾಖೆಯು ICMR(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಐಸಿಎಂಆರ್ ದೇಶಾದ್ಯಂತ ಒಂದು ದಿನಕ್ಕೆ ಸುಮಾರು 1 ಲಕ್ಷ ಕೋವಿಡ್-19 ಪರೀಕ್ಷೆಗಳನ್ನು ನಡೆಸಲು ಗುರಿ ಹೊಂದಿದ್ದು, ಇದನ್ನು ಸಾಧಿಸಲು ಭಾರತೀಯ ಅಂಚೆ ತನ್ನ 1,50,000 ಅಂಚೆ ಕಚೇರಿಗಳೊಂದಿಗೆ ಸಹಕರಿಸಲಿದೆ. ಭಾರತೀಯ ಅಂಚೆಯು ಈಗಾಗಲೇ ಲಾಕ್ ಡೌನ್ ಸಮಯದಲ್ಲಿ ಆಹಾರ ಮತ್ತು ಪಡಿತರ, ಔಷಧಿಗಳು, ಮೇಲ್‌ಗಳು ಮತ್ತು ಹಣಕಾಸಿನ ನೆರವು ನೀಡುವ ಮೂಲಕ ಜನರಿಗೆ ಸೇವೆ ಸಲ್ಲಿಸುವಲ್ಲಿ ಹೆಚ್ಚಿನ ಕೊಡುಗೆ ನೀಡುತ್ತಿದೆ.