Job Description: ನವದೆಹಲಿ: ಕೋರೋಣ ವೈರಸ್ ಜಾಗತಿಕವಾಗಿ ವ್ಯಾಪಿಸುತ್ತಿರುವ ಹಿನ್ನಲೆ ಬಹುತೇಕ ಎಲ್ಲ ರಾಷ್ಟ್ರಗಳು ಲಾಕ್ ಡೌನ್ ವಿಧಿಸಿವೆ, ಇದರಿಂದಾಗಿ ವಿದೇಶಗಳಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಕರೆತರಲು ಆಪರೇಷನ್ ಸಮುದ್ರ ಸೇತು ಕಾರ್ಯಾಚರಣೆಯನ್ನು ಭಾರತೀಯ ನೌಕಾ ಸೇನೆಯು ಆರಂಭಿಸಿದೆ. ಈಗಾಗಲೇ ಭಾರತೀಯ ನೌಕಾದಳದ ಐಎನ್ಎ ಜಲಾಶ್ವ ನೌಕೆ ಮಾಲ್ಡೀವ್ಸ್ನ ರಾಜಧಾನಿ ಮಾಲೆ ತಲುಪಿ, ದ್ವೀಪರಾಷ್ಟ್ರದಲ್ಲಿ ಸಂಕಷ್ಟದಲ್ಲಿರುವ ಒಂದು ಸಾವಿರಕ್ಕೂ ಅಧಿಕ ಭಾರತೀಯರನ್ನು ಹೊತ್ತ ಹಡಗು ಕೇರಳದ ಕೊಚ್ಚಿಗೆ ಮರಳಲಿದೆ.