Job Description: ಚೀನಾ ತನ್ನ ಹೈನಾನ್ ದ್ವೀಪದಲ್ಲಿರುವ ವೆನ್ಚಾಂಗ್ ಉಡಾವಣಾ ತಾಣದಿಂದ ಲಾಂಗ್ ಮಾರ್ಚ್ 5 ಬಿ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿತು. ಈ ರಾಕೆಟ್ ಒಂದು ಬೃಹತ್ ವಾಹನವಾಗಿದ್ದು, ಇದನ್ನು ನಾಸಾದ ಡೀಪ್ ಸ್ಪೇಸ್ ಓರಿಯನ್ ಕ್ಯಾಪ್ಸುಲ್ನೊಂದಿಗೆ ಹೋಲಿಸಲಾಗುತ್ತಿದೆ. ಭವಿಷ್ಯದಲ್ಲಿ ಶಾಶ್ವತವಾದ "ಟಿಯಾಂಗಾಂಗ್" ಎಂಬ ಬೃಹತ್ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಮತ್ತು ಗಗನಯಾತ್ರಿಗಳನ್ನು ಚಂದ್ರನಿಗೆ ಕಳುಹಿಸಲು ಅನುಕೂಲವಾಗುವಂತೆ ಚೀನಾ ಈ ನೂತನ ರಾಕೆಟ್ ಅಭಿವೃದ್ಧಿಪಡಿಸಿ ನೌಕೆಯನ್ನು ಉಡಾಯಿಸಿತು.