Job Description: ಬೆಂಗಳೂರು : ದಿನಾಂಕ 07 ಏಪ್ರಿಲ್ 2020 ರಂದು ಬೆಳಗ್ಗೆ ವಿಶಾಖಪಟ್ಟಣಂನ ರಾಸಾಯನಿಕ ಸ್ಥಾವರದಿಂದ ಅನಿಲ ಸೋರಿಕೆಯಿಂದಾಗಿ ಸುತ್ತಲಿನ ಐದು ಕಿಲೋಮೀಟರ್ ಗಳಲ್ಲಿನ ಹಳ್ಳಿಗಳಿಗೆ ವ್ಯಾಪಿಸಿತು, ಘಟನೆ ಹಿನ್ನೆಲೆಯಲ್ಲಿ ಹಲವು ಮಂದಿ ಸಾವಿಗೀಡಾಗಿದ್ದು, ಸಾವಿರಾರು ಮಂದಿ ತೀವ್ರ ಅಸ್ವಸ್ಥಗೊಂಡಿದ್ದು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಮುಚ್ಚಿದ ಪ್ಲಾಸ್ಟಿಕ್ ಕಾರ್ಖಾನೆಯನ್ನು ಪುನರಾರಂಭಿಸುವ ಸಿದ್ದತೆ ನಡೆಯುತ್ತಿರುವಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕಾರ್ಖಾನೆಯ ಸುತ್ತ ಸುಮಾರು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ 200-250 ಕುಟುಂಬಗಳಿಂದ ಸುಮಾರು 500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದು, ಮೃತರ ಬಂಧುಗಳಿಗೆ 1 ಕೋಟಿ ರೂ.ಗಳ ಸಹಾಯವನ್ನು ಘೋಷಿಸಿದ್ದಾರೆ.