Job Description: ನವದೆಹಲಿ : ಸಾಮಾನ್ಯ ನೋವು ನಿವಾರಕ ಔಷದಿಯಾದ ಪ್ಯಾರಾಸಿಟಮಲನ ತಯಾರಿಕೆಗೆ ಅಗತ್ಯವಾಗಿರುವ ಮುಖ್ಯ ಕಚ್ಚಾ ಪದಾರ್ಥಗಳನ್ನು ಭಾರತವು ಯುರೋಪ್ ರಾಷ್ಟ್ರಕ್ಕೆ ರಫ್ತು ಮಾಡಲು ಸಿದ್ಧತೆ ನಡೆಸಿದೆ. ಭಾರತವು ಸುಮಾರು 1,000 ಟನ್ ಸಕ್ರಿಯ ಔಷಧೀಯ ಘಟಕಾಂಶ (API)ವನ್ನು ಯುರೋಪಿಗೆ ಪೂರೈಸಲಿದೆ ಎಂದು ಭಾರತೀಯ ಔಷಧಿ ರಫ್ತು ಉತ್ತೇಜನ ಮಂಡಳಿ (ಫಾರ್ಮೆಕ್ಸಿಲ್) ತಿಳಿಸಿದೆ. * ಐರೋಪ್ಯ ಒಕ್ಕೂಟವು ಭಾರತದಿಂದ ಪ್ಯಾರಾಸಿಟಮಲ್ ಎಪಿಐಗಳ ಅತ್ಯಂತ ದೊಡ್ಡ ಖರೀದಿದಾರನಾಗಿದ್ದು ಪ್ರತಿವರ್ಷ ಸುಮಾರು 12,000 ಟನ್‌ಗಳಷ್ಟು ಆಮದು ಮಾಡಿಕೊಳ್ಳುತ್ತಿದೆ.