Job Description: ಹಿಂದೂ ಮಹಾಸಾಗರ ಪ್ರದೇಶದಲ್ಲಿನ ಉಂಟಾಗಬಹುದಾದ ಉಷ್ಣವಲಯದ ಚಂಡಮಾರುತಗಳಿಗೆ ಭಾರತೀಯ ಹವಾಮಾನ ಇಲಾಖೆ (IMD)ಯು 169 ಹೊಸ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. * ಭಾರತ, ಶ್ರೀಲಂಕಾ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಥೈಲ್ಯಾಂಡ್, ಕತಾರ್, ಯುಎಇ, ಸೌದಿ ಅರೇಬಿಯಾ, ಯೆಮೆನ್, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇರಾನ್ ಈ ಎಲ್ಲ 13 ರಾಷ್ಟ್ರಗಳ ಈ ಹೆಸರುಗಳನ್ನು ನೀಡಿವೆ. * ವಿಶ್ವ ಹವಾಮಾನ ಸಂಸ್ಥೆ ನಡೆಸಿದ ಉಷ್ಣವಲಯದ ಚಂಡಮಾರುತಗಳ (PTC) 45 ನೇ ಅಧಿವೇಶನದಲ್ಲಿ ಚಂಡಮಾರುತಗಳ ಹೊಸ ಪಟ್ಟಿಯನ್ನು ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.