Job Description: ಮುಂಬೈ : ಬಾಲಿವುಡ್ ನ ಖ್ಯಾತ ನಟ ರಿಷಿ ಕಪೂರ್ ತಮ್ಮ 67 ವಯಸ್ಸಿನಲ್ಲಿ ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ವಿಧಿವಶರಾಗಿದ್ದಾರೆ. * ಬಾಲಿವುಡ್ ಖ್ಯಾತ ತಾರೆಯಾದ ರಿಷಿ ಕಪೂರ್ ಅವರು ಹಲವು ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. * ರಿಷಿ ಕಪೂರ್ (4 ಸೆಪ್ಟೆಂಬರ್ 1952) ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. * ತಂದೆ ರಾಜ್ ಕಪೂರ್ ಅವರ ಚಲನಚಿತ್ರ ಮೇರಾ ನಾಮ್ ಜೋಕರ್ (1970) ನಲ್ಲಿ ಬಾಲ ಕಲಾವಿದರಾಗಿ ಚೊಚ್ಚಲ ಪಾತ್ರಕ್ಕಾಗಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. * 1973 ರಲ್ಲಿ ಬಾಬಿ ಚಿತ್ರದೊಂದಿಗೆ ಡಿಂಪಲ್ ಕಪಾಡಿಯಾ ಎದುರು ವಯಸ್ಕನಾಗಿ ಮೊದಲ ಪಾತ್ರವನ್ನು ನಿರ್ವಹಿಸಿದರು * 1974 ರಲ್ಲಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದ್ದಿದ್ದರು. * ಸುಮಾರು 92 ಚಲನಚಿತ್ರಗಳಲ್ಲಿ ನಾಯಕನಾಗಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.