Job Description: ಪ್ರತಿ ವರ್ಷ ಭಾರತ ಸರ್ಕಾರ ಏಪ್ರಿಲ್ 24 ಅನ್ನು ರಾಷ್ಟ್ರೀಯ ಪಂಚಾಯತಿ ರಾಜ್ ದಿನವಾಗಿ ಆಚರಿಸುತ್ತದೆ. ದಿನವನ್ನು "ರಾಷ್ಟ್ರೀಯ ಸ್ಥಳೀಯ ಸ್ವರಾಜ್ಯ" ದಿನ ಎಂದೂ ಕರೆಯುತ್ತಾರೆ. ರಾಷ್ಟ್ರೀಯ ಪಂಚಾಯತಿ ರಾಜ್ ದಿನವನ್ನು ಮೊದಲು 2010 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಘೋಷಿಸಿದರು, ಮತ್ತು ಈ ದಿನವನ್ನು ಪಂಚಾಯತಿ ರಾಜ್ ಸಚಿವಾಲಯದಿಂದ ಪ್ರತಿವರ್ಷ ಆಚರಿಸಲಾಗುವದು. * 2020 ರಲ್ಲಿ ರಾಷ್ಟ್ರೀಯ ಪಂಚಾಯತಿ ರಾಜ್ ದಿನಾಚರಣೆಯ ಮುನ್ನಾದಿನದಂದು ಪಿಎಂ ಮೋದಿ ಇ-ಗ್ರಾಮ ಸ್ವರಾಜ್ ಅರ್ಜಿ ಮತ್ತು ಪೋರ್ಟಲ್ ಅನ್ನು ಪ್ರಾರಂಭಿಸಿದರು. * 73 ನೇ ಸಾಂವಿಧಾನಿಕ ತಿದ್ದುಪಡಿ ಏಪ್ರಿಲ್ 24 ರಿಂದ ಜಾರಿಗೆ ಬಂದ ಹಿನ್ನಲೆ ಪಂಚಾಯತಿ ರಾಜ್ ದಿನವನ್ನು ಏಪ್ರಿಲ್ 24 ರಂದು ಆಚರಿಸಲಾಗುವದು.